Saturday 15 October, 2011

ಪುಸ್ತಕ ಪರಿಚಯ - "ಬಂಗಾರದ ಕತ್ತೆ"



ಬೀChiಯವರ ಕೃತಿ. ಹೆಸರೇ ಸೂಚಿಸುವಂತೆ ಮಡಿವಂತರಿಗೆ "Chi" ಎನ್ನಿಸಬಹುದಾದ ಲೇಖಕ. ಒಂದು ನಾಟಕ ಕಂಪನಿಯಲ್ಲಿ ನಡೆಯುವ ವಿದ್ಯಮಾನಗಳನ್ನು ಬೀChiಯವರು ಹಾಸ್ಯಮಿಶ್ರಿತ ಬರಹದ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ಉಪಯೋಗಿಸಿರುವ ಕೆಲ ಪದಗಳು ಕೆಲವು ಜನರಿಗೆ ಹಿಡಿಸಲಿಕ್ಕಿಲ್ಲ. ಆದರೆ ಇದೇ ಬೀChiಯವರ ಶೈಲಿ. ಅದನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು.

ಕಥೆಯ ಆರಂಭ ಹೀಗೆ --
"ವತ್ಸಾ, ಧ್ರುವಕುಮಾರ! ನಾನು ನಿನ್ನ ಘೋರ ತಪಸ್ಸಿಗೆ ಮೆಚ್ಚಿದ್ದೇನೆ, ಬೇಕಾದ ವರವನ್ನು ಕೇಳು."
"ಬಾಕಿ ಇರುವ ನನ್ನ ಮೂರು ತಿಂಗಳ ಸಂಬಳವನ್ನು ಕೊಟ್ಟು ಬಿಡಿ, ಮಹರಾಯರೇ. ನಾನು ಊರಿಗೆ ಹೋಗುವುದುಂಟು, ದಮ್ಮಯ್ಯ." 


ಲೇಖಕರು - ಬೀChi
ವಿತರಕರು - ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

2 comments:

  1. ಸರ್, ಉತ್ತಮ ಪುಸ್ತಕಗಳ ಪರಿಚಯ ಮಾಡಿಸುತ್ತಿರುವುದಕ್ಕೆ ಧನ್ಯವಾದಗಳು.

    ನನ್ನದೊಂದು ವಿನಂತಿ. ಪುಸ್ತಕ ಪರಿಚಯವು ಅದರ ಪ್ರಕಾಶಕರು ಮತ್ತು ವಿತರಕರ ಮಾಹಿತಿ ಹೊಂದಿದ್ದರೆ ಉತ್ತಮವೆನಿಸುತ್ತದೆ. ಕೊಳ್ಳುವವರಿದ್ದರೆ ಉಪಯೋಗವಾದೀತು, ಇಲ್ಲದಿದ್ದರೂ ಅಡ್ಡಿಯಿಲ್ಲ; ನಿಮ್ಮ ಈ ಕಾರ್ಯಕ್ರಮ ಹೀಗೆಯೇ ಮುಂದುವರೆಯಲಿ. :o)

    ReplyDelete
  2. @ಪ್ರಶಾಂತ್, ಸಲಹೆಗೆ ಧನ್ಯವಾದಗಳು :-)
    ಈ ಮಾಹಿತಿಗಳನ್ನು ಇಂದೇ ಅಳವಡಿಸುತ್ತೇನೆ.

    ReplyDelete