Monday, 1 April 2013

ಅರ್ಥಪೂರ್ಣ ಉಡುಗೊರೆ

ಕೆಳಗಿನವು ನನ್ನ ಮದುವೆಗೆ ಸಂಸ್ಕಾರ ಭಾರತಿ/ರಾಷ್ಟ್ರೋತ್ಥಾನ ಪರಿಷತ್ತಿನ ಹಿರಿಯರು ನೀಡಿದ ಶುಭಾಶಯ/ಉಡುಗೊರೆ. ಸಂಧರ್ಭಕ್ಕೆ ತಕ್ಕುದಾದ ಅರ್ಥಪೂರ್ಣ ಉಡುಗೊರೆ ... 





"ವಧುವಿಗೆ ಕಿವಿಮಾತು"... ಶೀರ್ಷಿಕೆ "ವಧು" ಎಂದಿದ್ದರೂ ಗಂಡ-ಹೆಂಡತಿ ಇಬ್ಬರು ಜೊತೆಯಾಗಿ ಓದಬೇಕಾದ ಕೃತಿ.

"ಮನೆಯೇ ಮಾಂಗಲ್ಯ"... 'ಮಾಂಗಲ್ಯ' ಎಂಬ ಪದದ ಅರ್ಥ ಮಂಗಲಕರವಾದದ್ದು, ಶುಭಪ್ರದವಾದದ್ದು .. ಹೀಗೆ ಮನೆಯು ನಿತ್ಯಮಂಗಲಕರವಾಗಿರಲು ಆಚಾರಸಂಹಿತೆಯನ್ನು ನಿರೂಪಿಸಿರುವ ಕೃತಿ ಇದು.

"ಭಕ್ತಿ ಸುಧಾ".. ೪೦೦ + ಶ್ಲೋಕ/ಭಜನೆಗಳ ಸಂಗ್ರಹ..  

"ಸನಾತನ ಭಾರತ" ... ಸ್ವಾಮಿ ವಿವೇಕಾನಂದರ ಉಪನ್ಯಾಸ ಸಂಗ್ರಹ.. 

"ರಾಷ್ಟ್ರ ನಿರ್ಮಾಣ" ... ಸ್ವಾಮಿ ವಿವೇಕಾನಂದರ ವಿಚಾರಧಾರೆಯ ಸಂಗ್ರಹ.. 

Thursday, 1 November 2012

ಜುಗಾರಿ ಕ್ರಾಸ್

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗಳು ನನಗೆ ಬಹ ಇಷ್ಟ ಆಗುತ್ತವೆ. ಕಾರಣ - ಪ್ರಕೃತಿಗೆ ಹತ್ತಿರವಾಗಿರುವ ಅವರ ಬರಹಗಳು ನಮಗೆ ಪ್ರಕೃತಿ ಮಡಿಲಿನಲ್ಲಿ ಓಡಾಡಿದ ಅನುಭವ ನೀಡುವಂತಿರುತ್ತದೆ.


"ಜುಗಾರಿ ಕ್ರಾಸ್" - ಇತ್ತೀಚಿಗೆ ಓದಿ ಮುಗಿಸಿದ ತೇಜಸ್ವಿಯವರ ಮತ್ತೊಂದು ಕಾದಂಬರಿ. ಕಾದಂಬರಿ ಬಗ್ಗೆ ಎರಡೇ ಪದಗಳಲ್ಲಿ ಹೇಳಬೇಕೆಂದರೆ - Simply Superb !!!
ಮೊದಲ ಪುಟದಿಂದ ಕೊನೆಯ ಪುಟದವರೆಗೂ ಹಿಡಿದಿಟ್ಟು ಕೂರಿಸುವಂತ ಕಾದಂಬರಿ. ಪುಸ್ತಕ ಕೆಳಗಿಡಲು ಮನಸ್ಸೇ ಬರವುದಿಲ್ಲ. ಮಲೆನಾಡಿನ ಕಾಡುಗಳಲ್ಲಿ ಸಾಗುವ ನಿಧಿ ಶೋಧನೆ, ಕಾಳ ದಂಧೆಯ ಕಥೆಯನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ಜರುಗುವ ಘಟನೆಗಳ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ.
ಸಿನಿಮಾ ಮಾಡಲು ಒಳ್ಳೆಯ ಕಥಾವಸ್ತು. ಯಾಕೆ ನಮ್ಮ ಕನ್ನಡ ಸಿನಿಮಾ ನಿರ್ಮಾಪಕರಿಗೆ ಇಂತ ಕಥೆಗಳು ಕಾಣಿಸುವುದಿಲ್ಲವೋ - ತಿಳಿಯದು!! ಮಚ್ಚು ಲಾಂಗು ರೌಡಿಸಂ ಸಿನೆಮಾಗಳ ಬದಲಿಗೆ ಇಂತ ಸದಭಿರುಚಿಯ ಕಥೆಗಳನ್ನು ಸಿನಿಮಾ ಮಾಡಬಹುದಲ್ಲವೇ!!

ಲೇಖಕರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು - ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು

Sunday, 16 September 2012

"ಮಾತ್ರೆಗಳು" - ಶಾರೀರಿಕ ರೋಗಕ್ಕಲ್ಲ; ಜನರ/ಸಮಾಜದ ಮನಸ್ಥಿತಿಗೆ



ಬೀChiಯವರ ಸಣ್ಣ ಲೇಖನಗಳ ಸಂಗ್ರಹ. 1-2 ಪುಟಗಳು ಮೀರದ ಲೇಖನಗಳು. ಆದರೆ ಚುಟುಕು ಬರಹದಲ್ಲೇ ಸಮಾಜಕ್ಕೆ ಕುಟುಕು ನೀಡಿದ್ದಾರೆ!! ಆಡುವುದು ಒಂದು ಮಾಡುವುದು ಇನ್ನೊಂದು ಎನ್ನುವಂತೆ ಬದುಕುವ ಜನರ/ಸಮಾಜದ ಬಗ್ಗೆ ಹಾಸ್ಯ ಮಿಶ್ರಿತ ಲೇಖನಗಳು.

ಲೇಖಕರು - ಬೀChi
ಪ್ರಕಾಶಕರು - ಸಮಾಜ ಪುಸ್ತಕಾಲಯ, ಶಿವಾಜಿ ಬೀದಿ, ಧಾರವಾಡ