Monday 24 June, 2013

"ತುಮುಲ"

ತಾಯಿ ಮಮತೆ  - ಅದು ಯಾವ ದೇಶ/ಭಾಷೆ/ಜಾತಿಯಾಗಲಿ - ಬಹಳ ಶ್ರೇಷ್ಠವಾದದ್ದು. ತನ್ನ ಮಕ್ಕಳ ಹಿತಕ್ಕಾಗಿ ಎಂತಹ ತ್ಯಾಗ ಮಾಡಲೂ ಸಿದ್ಧವಿರುವ ಮಹಾನ್ ಜೀವ.


"ತುಮುಲ" ದಲ್ಲಿ ತಾಯಿ ಮಮತೆಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಹೆತ್ತ ಮಗನಲ್ಲದಿದ್ದರೂ, ರೂಪಿಂದರ್ ಹಾಗು ಸುಮತಿ ಮುಖೇಶನ ಮೇಲೆ ತೋರುವ ಪ್ರೀತಿ ತಾಯಿ ಹೃದಯವನ್ನು ಚೆನ್ನಾಗಿ ಬಣ್ಣಿಸಿದೆ. ಅದರಲ್ಲೂ ಸುಮತಿ, ತಾವು ಹೆತ್ತ ತಾಯಿ-ತಂದೆ ಅಲ್ಲ ಎಂದು ಮುಖೇಶನಿಗೆ ತಿಳಿದರೆ ಅವನೆಲ್ಲಿ ದೂರವಾಗುತ್ತಾನೋ ಎಂಬ ಭಯದಿಂದ ಅವನನ್ನು ಅಧಿಕೃತ ಮಗನನ್ನಾಗಿ ಮಾಡಲು ಹೂಡಿದ ಉಪಾಯ ಮೆಚ್ಚುವಂತದ್ದೆ. ಅಲ್ಲದೆ ರೊಪಿಂದರ್ ಗೆ ಮಾತು ಕೊಟ್ಟಂತೆ, ಕಷ್ಟ ಪಟ್ಟು ದುಡಿದು  ಮುಖೇಶನಿಗೆ ಸಂಸ್ಕಾರಯುತ ಶಿಕ್ಷಣ ನೀಡಿದ ಪರಿ ಹೆಣ್ಣಿನ/ತಾಯಿಯ ಮನೋಸ್ಥೈರ್ಯವನ್ನು ಚೆನ್ನಾಗಿ ನಿರೂಪಿಸಿದೆ.

ಒಂದು ಫೋಟೋದಿಂದಾಗಿ ಮುಖೇಶನ ಬದುಕಿನಲ್ಲಿ ಏಳುವ ತಲ್ಲಣಗಳೇ "ತುಮುಲ'.

"ತುಮುಲ' - ನಾನು ಓದಿದ, ಸುಧಾ ಮೂರ್ತಿಯವರ ಪ್ರಥಮ ಕಾದಂಬರಿ. ಅವರಿಗೆ ಭಾಷೆಯ ಮೇಲಿರುವ ಹಿಡಿತ ನೋಡಿ ಖುಷಿಯಾಯಿತು. ಬಹಳ ಸರಳವಾದ ಭಾಷೆಯ ಮೂಲಕ ಒಂದು ಉತ್ತಮ ಕಥೆ/ಸಂದೇಶ ನೀಡಿದ್ದಾರೆ.


ಪ್ರಕಾಶಕರು: ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - 560009
ಲೇಖಕರು: ಸುಧಾ ಮೂರ್ತಿ 

No comments:

Post a Comment