Thursday 27 January, 2011

(ಹ)ಗ(ರ)ಣರಾಜ್ಯೋತ್ಸವ !!!

ಇತ್ತೀಚಿಗೆ ಭಾರತ ದೇಶದ ಉದ್ದಗಲಕ್ಕೂ ಆಚರಿಸಿದ "ಸಂಭ್ರಮ"ದ ಗಣರಾಜ್ಯೋತ್ಸವದ ಸಂಧರ್ಭದಲ್ಲಿ ಈ ಆಲೋಚನೆ.

from Google images

ಎಲ್ಲರಿಗೂ ತಿಳಿದಿರುವಂತೆ "ಗಣರಾಜ್ಯೋತ್ಸವ" - by definition - ದೇಶಕ್ಕೆ ಒಂದು ಸಂವಿಧಾನ ರೂಪಿಸಿ ಜಾರಿಗೊಳಿಸಿದ ನೆನಪಿಗಾಗಿ ನಡೆಯುವ ವಾರ್ಷಿಕ ಆಚರಣೆ. ಇದೆ ೨೬ರಂದು ದೇಶದೆಲ್ಲೆಡೆ ಸಂಭ್ರಮದ ೬೨ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ದೇಶದಲ್ಲಿ ನಡೆದ-ನಡೆಯುತ್ತಿರುವ ವಿಧ್ಯಮಾನಗಳನ್ನು ಗಮನಿಸಿದರೆ ಇದು ಗಣರಾಜ್ಯೋತ್ಸವೋ ಅಥವಾ ಹಗರಣರಾಜ್ಯೋತ್ಸವವೋ? ಎಂದೆನಿಸಿದರೆ ಆಶ್ಚರ್ಯವಿಲ್ಲ!!!

ದಿನ ಬೆಳಗಾದರೆ ಪತ್ರಿಕೆಯ ಮುಖಪುಟದ ತುಂಬೆಲ್ಲ ಬರೀ ಮೋಸ, ವಂಚನೆ, ಹಗರಣಗಳೇ!!! - "2G scam, land scam, mining scam, black money in foreign accounts,  CWG scam - ಬರೀ ಇವೇ ಸುದ್ದಿ. ರೌಡಿಗಳ ಬೀದಿ ಕಾಳಗ, ಸರಕಾರಿ ಇಲಾಖೆಯಲ್ಲಿನ ಲಂಚಾವತಾರ - ಇವೆಲ್ಲ ನೋಡಿದರೆ ದೇಶದಲ್ಲಿ ಒಂದು ಕಾನೂನು/ಸಂವಿಧಾನ ಅಸ್ಥಿತ್ವದಲ್ಲಿ ಇದೆಯೇ ಎಂದು ಯೋಚಿಸುವ ಪರಿಸ್ಥಿತಿ ಬಂದೊದಗಿದೆ. ಇವೆಲ್ಲದರ ನಡುವೆ ಎಲ್ಲೋ ಅಪರೂಪಕ್ಕೆ ಕಾಣಸಿಗುವ ಒಂದಿಬ್ಬರು ನಿಷ್ಟಾವಂತ ಅಧಿಕಾರಿಗಳು ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುವ ಪರಿಸ್ಥಿತಿ...೬೨ನೇ ಗಣರಾಜ್ಯೋತ್ಸವದ ಕೇವಲ ೨ ದಿನ ಮುಂಚೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.

courtesy@The Telegraph

ಒಮ್ಮೆ ಯೋಚಿಸಿ ನೋಡಿ - ಇದಕ್ಕೆಲ್ಲ ಕಾರಣ ಯಾರು? ಭಾರತ ದೇಶದ ಸಮಸ್ತ ನಾಗರಿಕರೇ ಇದಕ್ಕೆಲ್ಲ ಹೊಣೆ ಎಂದರೆ ತಪ್ಪಾಗಲಾರದು. ಎಲ್ಲಿ ತನಕ ನಾವು "ಸ್ವಲ್ಪ adjust" ಮಾಡ್ಕೊಳಿ ಎನ್ನುವ ಮನಸ್ಥಿತಿಇಂದ ಹೊರಬರುವುದಿಲ್ಲವೂ ಅಲ್ಲಿಯ ತನಕ ಸುಧಾರಣೆ ಅಸಾಧ್ಯ!!!! 

2 comments:

  1. ನಿಮ್ಮ ಪ್ರತಿಯೊಂದು ಮಾತು ಅಕ್ಷರಸಹ ನಿಜ ಸರ್ :o)

    ReplyDelete
  2. ಹೌದು ಸುಧೀರ್... ವರ್ಷದಿಂದ ವರ್ಷಕ್ಕೆ ವ್ಯವಸ್ಥೆ ಸುಭದ್ರವಾಗುವ ಬದಲು ಹಳಿತಪ್ಪುತ್ತಿದೆ .... ಜನ ಈಗ ಹಗರಣಗಳನ್ನು "ಸ್ವಲ್ಪ adjust" ಮಾಡಿಕೊಳ್ಳೋಕೆ ಪ್ರಾರಂಬಿಸಿರುವ ಹಾಗೆ ಕಾಣಿಸುತ್ತದೆ ...
    ನನ್ನ ಅನಿಸಿಕೆ ಪ್ರಕಾರ ನಮ್ಮ ದೇಶದ 'ಮೃದು ಧೋರಣೆಯ' ನ್ಯಾಯ ವ್ಯವಸ್ಥೆ ಇದಕ್ಕೆ ಮುಖ್ಯ ಕಾರಣವಾಗಿ ತೋರಿಸುತ್ತಿದೆ....
    ಅಪರಾಧಿಗಳಿಗೆ ಶಿಕ್ಸ್ಯೆಯಾಗುವ ಸುದ್ದಿಗಳು ಬಲು ಅಪರೂಪ .... ಅದೇಂತ ಹಗರಣವೇ ಆಗಿರಲಿ ... ದಶಕಗಳ ಕಾಲ ವಿಚಾರಣೆ ನಡೆಸುತ್ತ ಸಮಯ ಹಣ ಎಲ್ಲ ವ್ಯರ್ಥ ಮಾಡುತ್ತಾ ಅಪರಾಧಿಗಳು ತಮ್ಮ ಮಾಮೂಲ್ ಜೀವನ ನಡೆಸುತ್ತಾ ಇರುತ್ತಾರೆ .... ಜನರಲ್ಲಿ ಕಾನೂನಿನ ಮಾತು ಸಂವಿಧಾನದ ಹಿಡಿತ ಬಿಗಿಗೊಳಿಸದಿದ್ದರೆ ವ್ಯವಸ್ಥೆ ಸುಧಾರಿಸುವುದು ಕಷ್ಟದ ಮಾತು !

    ReplyDelete