Tuesday 20 December, 2011

ಮೂಲಭೂತ ಶಿಕ್ಷಣ


ಆಸ್ಟ್ರೇಲಿಯಾದಲ್ಲಿರಬೇಕಾದರೆ ಕಂಡ ಒಂದು ದೃಶ್ಯ ಮನಸ್ಸಿನಲ್ಲಿ ಹಾಗೇ ಅಚ್ಚೊತ್ತಿದೆ. ಬೆಂಗಳೂರಿನ ರಸ್ತೆಗಳಲ್ಲಿ ಉಗುಳುವವರನ್ನು, ಎಲ್ಲೆಂದರಲ್ಲಿ ಕಸ ಬಿಸಾಡುವವರನ್ನು, ಮೂತ್ರ ವಿಸರ್ಜಿಸುವವರನ್ನು ಕಂಡಾಗ ಈ ದೃಶ್ಯ ಪದೇ ಪದೇ ನೆನಪಾಗುತ್ತದೆ.

ಒಂದು ಭಾನುವಾರ ಸಂಜೆ ನಾವಿದ್ದ apartment ಬಳಿ ಇರುವ ಉದ್ಯಾನವನದಲ್ಲಿ walking ಹೊರಟಿದ್ದೆ - ಎಲ್ಲೊ ಅಮಾವಾಸ್ಯೆ-ಹುಣ್ಣಿಮೆಗೆ ಆರೋಗ್ಯದ ಕಾಳಜಿ ಉಂಟಾಗಿ ಒಂದು ಅರ್ಧ ಗಂಟೆ walking ಹೋಗುತ್ತಿದ್ದೆ!! ಆ ದಿನ, ಅದೇ ಸಮಯದಲ್ಲಿ ಒಂದು ಪುಟ್ಟ ಮಗು, 3 - 4 ವಯಸ್ಸಿರಬಹುದು, ತನ್ನ ತಾಯಿಯ ಜೊತೆಯಲ್ಲಿ ಅದೇ ಉದ್ಯಾನವನದ ಹುಲ್ಲು ಹಾಸಿನ ಮೇಲೆ ಕುಳಿತ್ತಿತ್ತು. ಕೈಯಲ್ಲಿ ಒಂದು ತಿಂಡಿಯ ಪೊಟ್ಟಣ, ಮುಖದಲ್ಲಿ ಸಂತೃಪ್ತಿಯ ನಗೆ!! ನಾನು ಒಂದೆರಡು ಸುತ್ತು ಹಾಕಿ ಬರುವುದರಲ್ಲಿ ತಿಂಡಿ ತಿಂದು ಮುಗಿಸಿದ ಮಗು ಖಾಲಿ ಪೊಟ್ಟಣವನ್ನು ಅಲ್ಲೇ ನೆಲದ ಮೇಲೆ ಬಿಸಾಡಿತು. ಅದನ್ನು ನೋಡಿದ ತಾಯಿ ಮಗುವಿಗೆ ಒಂದು ಏಟು ಕೊಟ್ಟು, ಮಗುವಿನ ಕೈಯಲ್ಲೇ ಪೊಟ್ಟಣವನ್ನು ಎತ್ತಿಸಿ ಅಲ್ಲೇ ಬದಿಯಲ್ಲಿ ಇದ್ದ ಕಸದ ಬುಟ್ಟಿಗೆ ಹಾಕಿಸಿದಳು! ಇದು practical ಶಿಕ್ಷಣ!!

ಎಳೇ ವಯಸ್ಸಿನಲ್ಲೇ ಮಕ್ಕಳಿಗೆ ಸ್ವಚ್ಛತೆಯ ಪಾಠ ಕಲಿಸಿದರೆ ಮುಂದೆ ಅದೇ ರೂಢಿಯಾಗುತ್ತದೆ. ಇಂತ ಚಿಕ್ಕ ಪುಟ್ಟ ಪಾಠಗಳೇ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಗು ಇದು ಚಿಕ್ಕ ಮಗುವಿದ್ದಾಗಲೇ ಮನೆಯಿಂದಲೇ ಶುರುವಾಗಬೇಕು. ಅದಕ್ಕೆ ಹಿರಿಯರು ಅಂದದ್ದು - ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು!!



1 comment:

  1. ಸರಿಯಾಗಿ ಹೇಳಿದಿರಿ ಸುಧೀರ್ ಸರ್. ಇದು ನಮ್ಮ ಬೆಂಗಳೂರಿನಲ್ಲಿ ಮಾತ್ರ ಕಂಡುಬರುವ ಪೀಡೆಯಲ್ಲ, ಸಧ್ಯ ನಾನಿರುವ ರಾಷ್ಟೀಯ ರಾಜಧಾನಿ ದೆಹಲಿಯಲ್ಲಿಯೂ ಸಹ ಇಂಥದ್ದೇ ದೃಶ್ಯಗಳು ಸರ್ವೇಸಾಮಾನ್ಯ. 'ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು' ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ! :o)

    ReplyDelete