Monday, 6 February 2012

ಟಿಕೇಟು ಕೊಡ್ತೀನಿ!!

ವಸುಧೇಂದ್ರರವರು ಬರೆದ "ಹರಿಚಿತ್ತ ಸತ್ಯ" ಎನ್ನುವ  ಕಾದಂಬರಿ ಓದುತ್ತಿದ್ದೆ. ಕಥೆಯಲ್ಲಿ ಒಬ್ಬ ಬಸ್ಸು ನಿರ್ವಾಹಕ ಹಾಗು ಒಬ್ಬಳು ಹೆಂಗಸಿನ ನಡುವಿನ ಸಂಭಾಷಣೆ ಓದಿ ನಗು ತಡೆಯಲಾಗಲಿಲ್ಲ. ಅದು ಈ ರೀತಿ ಇದೆ :-

ದಾರಿ ಮಧ್ಯದಲ್ಲಿ ಬಸ್ಸು ಕೆಟ್ಟು ನಿಂತಿತ್ತು. ನಿರ್ವಾಹಕ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಯಲು ಕೇಳಿಕೊಳ್ಳುತ್ತಿದ್ದ.
ನಿರ್ವಾಹಕ: ಇಳೀರಮ್ಮೋ ಇಳೀರಿ. ಬಸ್ಸಿಗೆ ಜಾಕ್ ಹಾಕಬೇಕು.
ಹೆಂಗಸು: ಮತ್ತೆ ಬಸ್ಸು ಶುರುವಾದಾಗ ನಮಗೆ ಕೂಡೋದಕ್ಕೆ ಸೀಟು ಕೊಡ್ತೀ ಅಲ್ಲೇನಪ್ಪೋ? ನಿಂತುಗೊಂಡು ಹೋಗೋ ಹಂಗೆ ಮಾಡಬೇಡ. ನಂಗೆ ಮೊದಲೇ ಮೊಣಕಾಲು ನೋವು. ಇಲ್ಲ ಅಂದ್ರೆ ನಾನು ಬಸ್ಸು ಇಳಿಯಾಕಿನೇ ಅಲ್ಲ ನೋಡು.
ನಿರ್ವಾಹಕ: ಅಜ್ಜಿ ಸೀಟಿಗ್ಯಾಕೆ ಚಿಂತಿ ಮಾಡ್ತೀ ಬಿಡು. ಎಲ್ಲೂ ಇಲ್ಲ ಅಂದ್ರೆ ಡ್ರೈವರ್ ಗೆ ಸೀಟು ಬಿಟ್ಟು ಕೊಡಲಿಕ್ಕೆ ಹೇಳ್ತೀನಿ. ಆತ ನಿಂತುಗೊಂಡು ಬರ್ತಾನೆ.
ಅಜ್ಜಿ: ಹಂಗೇ ಆಗ್ಲೇಳೋ ನಮ್ಮಪ್ಪ. ದಿನಾ ಎಲ್ಲರಿಗೂ ಟಿಕೇಟು ಕೊಟ್ಟೂ ಕೊಟ್ಟೂ ನಿನಗೂ ಬ್ಯಾಸರ ಬಂದಿರ್ತದೆ. ಈವತ್ತು ನಾನು ನಿಂಗೆ ಟಿಕೇಟು ಕೊಡ್ತೀನಿ ತೊಗೋ !!

1 comment:

  1. ಹ್ಹ ಹ್ಹ ಹ್ಹ ... ಉತ್ತಮ ಹಾಸ್ಯ. ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್. ಇತ್ತೀಚಿಗೆ ಶ್ರೀ ವಸುಧೇಂದ್ರ ಅವರೊಂದಿಗಿನ ಸಂವಾದದ ನಡುವೆ ಅವರು ಸಿಡಿಸಿದ ಹಾಸ್ಯ ಚಟಾಕಿಗಳನ್ನು ನಿಮ್ಮ ಈ ಬರಹವು ನನ್ನ ನೆನಪಿಗೆ ತಂದಿತು :o)

    ReplyDelete