ಸ್ವಾತಂತ್ರ್ಯಾನಂತರದ ಸುಮಾರು ೧೫ ವರ್ಷಗಳ ಕಾಲ ಹಾಗಲವಾಡಿ ಸಂಸ್ಥಾನದ "king maker" ಆಗಿ ಬದುಕಿ, ಅಳಿದ ಚಂದ್ರಕಾಂತ ಗುಪ್ತ ಎನ್ನುವ ವ್ಯಕ್ತಿ ಇಲ್ಲಿ ಮುಖ್ಯ ಪಾತ್ರದಾರಿ. ಇವರ ಅಭಿಮಾನಿಗಳಲ್ಲೊಬ್ಬರಾದ ಪತ್ರಕರ್ತ ರಂಗನಾಥ ರಾಯರು ದಿವಂಗತ ಚಂದ್ರಕಾಂತ ಗುಪ್ತರ ಜೀವನ ಚರಿತ್ರೆ ಬರೆಯಲು ತೊಡಗುತ್ತಾರೆ. ಇದಕ್ಕಾಗಿ ಮಾಹಿತಿ ಸಂಗ್ರಹಿಸಲು ದಿವಂಗತ ಗುಪ್ತರ ಮಡದಿ, ನಳಿನಿಯೊಡನೆ ಸಮಾಲೋಚಿಸಿದಾಗ ಅವರಿಗೆ ಸಿಗುವುದು ಕೇವಲ ಇತ್ತೀಚಿನ ಹತ್ತಿಪತ್ತು ವರ್ಷಗಳ ವಿವರ. ಇದಕ್ಕೂ ಹಿಂದಿನ ಮಾಹಿತಿಯನ್ನು ಕಲೆ ಹಾಕಲು ಇಬ್ಬರೂ ಜೊತೆಗೂಡಿ ಊರೂರು ಸುತ್ತಿ ಗುಪ್ತರ ಪೂರ್ವ ಚರಿತ್ರೆಯನ್ನು ಕೆದಕುತ್ತ ಹೋದಂತೆ ಅವರ ಇನ್ನೆರಡು ರೂಪಗಳು ಅನಾವರಣಗೊಳ್ಳುತ್ತವೆ.
ಈ ರೀತಿ ಮೂರು ಸ್ಥಳಗಳಲ್ಲಿ, ಮೂರು ವಿವಿಧ ಕಾಲಮಾನಗಳಲ್ಲಿ, ಮೂರು ಅವತಾರದಂತೆ ಬದುಕಿದ ವ್ಯಕ್ತಿಯ ಜೀವನವೇ "ಮೂಜನ್ಮ". ಈ ಮೂಜನ್ಮದ ವಿವರಗಳನ್ನು ಓದಿ ಆನಂದಿಸಿ!!
"ಮೂಜನ್ಮ"ದಿಂದ ಆಯ್ದ ಒಂದೆರಡು ಸಾಲುಗಳು --- "ವ್ಯಕ್ತಿ ಸ್ವಾರ್ಥಕ್ಕೆ ಇರಿಸಿಕೊಂಡಂಥ ಒಂದು ಭವ್ಯ ಹೆಸರೆಂದರೆ - ದೇಶಸೇವೆಯೆಂಬ ಪದ. ಅದು ಹಳಸಿದರೆ 'ಜನತಾ ಸೇವೆ' ಎಂದರಾಯಿತು. ಅದರ ಸಾಧನೆಗಾಗಿ ದಿನ ದಿನ ಹೊಸ ತಂತ್ರ, ಮಂತ್ರಗಳನ್ನು ಹುಡುಕುತ್ತಲೇ ಇದ್ದಾರೆ. ಯಾವ ಮಂತ್ರವನ್ನು ಜನಪ್ರಿಯವನ್ನಾಗಿ ಮಾಡಿದರೆ ದೇಶದ ಮೂಢಮತಿಗಳು 'ಭಜ ಗೋವಿಂದಂ' ಎಂದು ಭಕ್ತಿಯಿಂದ ಕಣ್ಮುಚ್ಚಿ ಕುಳಿತಿರುತ್ತಾರೆ - ಎಂಬ ಉಪಾಯ ಹುಡುಕುತ್ತಿದ್ದಾರೆ."
ಲೇಖಕರು - ಡಾ|| ಕೆ.ಶಿವರಾಮ ಕಾರಂತ
ವಿತರಕರು - ಸಪ್ನ ಬುಕ್ ಹೌಸ್
ಉತ್ತಮ ಕಾರ್ಯಕ್ರಮ ಸರ್. ಕನ್ನಡ ಭಾಷಾ-ಪುಸ್ತಕಗಳ ಬಗೆಗೆ ಇತರರಿಗೆ ತಿಳಿಸಿಕೊಡುವ ನಿಮ್ಮ ಈ ಪ್ರಯತ್ನ ಹೀಗೆಯೇ ಮುಂದುವರೆಯಲಿ. ತನ್ಮೂಲಕ ಕನ್ನಡ ಭಾಷೆಯ ಶ್ರೀಮಂತ ಸಾಹಿತ್ಯಗಳ ಬಗ್ಗೆ ತಿಳಿಯುವ ಭಾಗ್ಯ ನಮ್ಮದಾಗಲಿ..
ReplyDelete(ಸರ್, ದಯವಿಟ್ಟು ಕನ್ನಡದಲ್ಲಿ ನಿಮ್ಮದೊಂದು ಲೇಖನವನ್ನು ಕಹಳೆ (www.kahale.gen.in) ಗೆ ಕಳುಹಿಸಿಕೊಡಿ. ನಿಮ್ಮ ಇ-ಮೇಲ್ ವಿಳಾಸ ಇಲ್ಲದ ಕಾರಣ ಇಲ್ಲೇ ಕೋರಿಕೆ ಸಲ್ಲಿಸಿದ್ದೇನೆ, ಕ್ಷಮೆ ಇರಲಿ)
ಧನ್ಯವಾದಗಳು ಪ್ರಶಾಂತ್ :-)
ReplyDeleteನಿಮ್ಮ ಕೋರಿಕೆಗೆ ಧನ್ಯವಾದಗಳು, ಆದರೆ ನಾನ್ನಿನ್ನೂ ಬರವಣಿಗೆಯ ಅ, ಆ, ಇ, ಈ ಕಲಿಯುತ್ತಿರುವವ!! ನನ್ನ ಬರವಣಿಗೆಗಳಿಗೆ ಒಂದು ಪಕ್ವತೆ ಬಂದಿಲ್ಲವೆಂದು ನನ್ನ ಭಾವನೆ. ಆದ ಕಾರಣ "ಕಹಳೆ"ಗೆ ಏನೂ ಕೊಡುಗೆ ನೀಡಲಾಗಲ್ಲಿಲ್ಲ!!
ಆದರೆ ನನ್ನ ಒಬ್ಬ ಮಿತ್ರನಿದ್ದಾನೆ. ಅವನಲ್ಲಿ ಪ್ರಯತ್ನಿಸಿ ನೋಡುತ್ತೇನೆ. ಆತನ ಬ್ಲಾಗ್ ಪುಟ -- http://ppsringeri.blogspot.com/
ಧನ್ಯವಾದಗಳು :-)