Friday, 14 January 2011

संस्कृताय जीवनं

"हरि ॐ" - ಇದು ಬೆಂಗಳೂರಿನಲ್ಲಿ ಇತ್ತೇಚೆಗೆ ಜರುಗಿದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಎಲ್ಲ ಸ್ವಯಂಸೇವಕರ ಬಾಯಿಂದ ಹೊರಟ ಧ್ವನಿ - ಮೇಳಕ್ಕೆ ಬಂದ ಜನರನ್ನು ನಗುಮೊಗದಿಂದ ಸ್ವಾಗತಿಸಿದ ಪರಿ!!

ಸ್ವಾಗತ ಕಮಾನು

ಜನವರಿ ೭ರಿಂದ, ೪ ದಿನಗಳ ಕಾಲ ನಡೆದ ಸಂಸ್ಕೃತ "ಉತ್ಸವ"ದಲ್ಲಿ ಪಾಲ್ಗೊಂಡ ಮಂದಿ ಲಕ್ಷಾಂತರ. ನಾನು ೨ ದಿನ ಮೇಳಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಏರ್ಪಡಿಸಿದ್ದ "ಜ್ಞಾನಗಂಗಾ" ಪ್ರದರ್ಶಿನಿ ಬಹಳ ಚೆನ್ನಾಗಿತ್ತು. ಪ್ರಾಚೀನ ಕಾಲದ ವೇದ-ವಿಜ್ಞಾನಗಳ ಕಿರು ಪರಿಚಯ, ಮಹಾಭಾರತ ಯುದ್ಧದ ವ್ಯೂಹ ರಚನೆಗಳ ಮಾದರಿ, Pencil ಮೊನೆಯ ಮೇಲೆ ಕೆತ್ತಿದ ಗಣಪನ ವಿಗ್ರಹ ಎಲ್ಲವೂ ಆಕರ್ಷಕವಾಗಿತ್ತು.

ಚಕ್ರ ವ್ಯೂಹ

ಸಂಸ್ಕೃತಕ್ಕೆ ಸಂಬಂದಪಟ್ಟ ಪುಸ್ತಕಗಳ ಮಾರಾಟ ಭರ್ಜರಿಯಾಗಿತ್ತು. ಎಲ್ಲ ೧೫೪ ಅಂಗಡಿಯ ಮುಂದೆ ಜನ ಜಾತ್ರೆ!!!!


ಮಾದರಿ "ಸಂಸ್ಕೃತ ಗ್ರಾಮ" ಇನ್ನೊಂದು ಆಕರ್ಷಣೆ. ವಿಧ್ಯಾಲಯ, ಅಂಚೆ ಕಚೇರಿ, ವಾಹನ ದುರಸ್ಥಿ ಸ್ಥಳ, ಸಂಸ್ಕೃತ ಭಾಷಿಕ ಮನೆ, ನ್ಯಾಯಾಲಯ - ಎಲ್ಲೆಲ್ಲೂ ಸಂಸ್ಕೃತದಲ್ಲೇ ಸಂಭಾಷಣೆ!!!

ಸಂಸ್ಕೃತ ಗ್ರಾಮ

ಇದಲ್ಲದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಸಂಸ್ಕೃತ ಯಕ್ಷಗಾನ, ನಾಟಕ, ನೃತ್ಯ, ಹಾಡುಗಾರಿಕೆ, ವಿಚಾರ ಸಂಕೀರ್ಣ ಮುಂತಾದವು.

ವಿಚಾರ ಮಂಥನ



ಈ ಮೇಳದಿಂದ ನನಗೆ ಒಂದು ಒಳ್ಳೆ ಪ್ರಾಯೋಜನ ಆಯಿತು. ಬಹಳ ದಿನಗಳಿಂದ ಸಂಸ್ಕೃತ ಕಲಿಯಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಸರಿಯಾದ ವೇದಿಕೆ ಸಿದ್ದವಾಗಿರಲಿಲ್ಲ :-) "ಸಂಸ್ಕೃತ ಭಾರತಿ" ಸಂಸ್ಥೆಯು, ಅಂಚೆ ಮೂಲಕ ಸಂಸ್ಕೃತ ಶಿಕ್ಷಣ ಎಲ್ಲ ವರ್ಗದ ಜನರಿಗೂ ದೊರೆಯುವಂತೆ ಮಾಡುತ್ತಿದ್ದಾರೆ. ನಾನು ಕೂಡ ಇದಕ್ಕೆ ಸೇರಿಕೊಂಡಿದ್ದೇನೆ. ವರ್ಷಕ್ಕೆ ೨ ಬಾರಿ ಪರೀಕ್ಷೆಗಳಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಸ್ಕೃತ ಭಾರತಿ ಶಾಖೆಗಳನ್ನೂ ಸಂಪರ್ಕಿಸಬಹುದು - http://www.samskritabharati.org/sbindia/

ಅಂತೂ ಈ ಮೇಳ ಸಂಸ್ಕೃತವು ಇನ್ನೂ ಜೀವಂತವಾಗಿದೆ ಎಂದು ನಿರೂಪಿಸುವಲ್ಲಿ ಯಶಸ್ವಿಯಾಯಿತು.





2 comments:

  1. ಸುಧೀರ್... ಸಂಸ್ಕೃತ ನಗರಿಯ ಬ್ಲಾಗ್ ದರ್ಶನಕ್ಕೆ ಧನ್ಯವಾದಗಳು ....
    ಸಂಸ್ಕೃತ ಬಗೆಗಿನ ನಿನ್ನ ಆಸಕ್ತಿಯ ಹಿನ್ನಲೆ ಏನಿರಬಹುದು?

    ReplyDelete
  2. :-)
    ದಿನಾಲೂ ಸಂಧ್ಯಾವಂದನೆ ಮಾಡುವಾಗ ಹಾಗು ಬೇರೆ ಬೇರೆ ವೇದ ಮಂತ್ರಗಳನ್ನು ಕೇಳುವಾಗ ಅದರ ಅರ್ಥ ಏನಿರಬಹುದು ಎಂದು ಯೋಚಿಸುತ್ತಿದ್ದೆ. ನಮ್ಮ ಶಾಲೆಯಲ್ಲಿ ಸಂಸ್ಕೃತ ಕಲಿಯಲು ಅವಕಾಶ ಇರಲಿಲ್ಲ. ಬಹಳ ದಿನಗಳಿಂದ ಸಂಸ್ಕೃತ ಕಲಿಯಬೇಕು ಅಂತ ಯೋಚಿಸುತ್ತಿದ್ದೆ. ಅದ್ದರಿಂದ ಸಂಸ್ಕೃತ ಬಗೆಗಿನ ಮೇಳಕ್ಕೆ ಭೇಟಿ ನೀಡುವ ಮನಸ್ಸಾಯಿತು.

    ReplyDelete