Little India - ಇದೇನಪ್ಪ ಅಂತ ಯೋಚಿಸ್ತಾ ಇದ್ದೀರಾ? ಸಿಂಗಪೋರ್ ಎಂಬ ಪುಟ್ಟ ದೀಪ ರಾಷ್ಟ್ರಕ್ಕೆ ಭೇಟಿ ಇಟ್ಟವರಿಗೆ ಈ ಹೆಸರು ಚಿರಪರಿಚಿತ. ಇಲ್ಲಿಗೆ ಭೇಟಿ ನೀಡದಿದ್ದರೆ ನಿಮ್ಮ ಸಿಂಗಪೋರ್ ಪ್ರವಾಸ ಅಪೂರ್ಣವೆಂದೇ ಹೇಳಬಹುದು.
ಹಾಗಂತ ಇಲ್ಲಿ ಏನು ವಿಶೇಷ ಅಂತೀರಾ? ಇಲ್ಲಿ ಕಾಲಿಟ್ಟ ತಕ್ಷಣ ನಿಮಗನ್ನಿಸಬಹುದು - ನಾವೇನು ಸಿಂಗಪೋರ್ ನಲ್ಲಿ ಇದ್ದೇವಾ ಅಥವಾ ಚೆನ್ನೈನ ಟಿ.ನಗರ್ ನಲ್ಲೋ - ಆ ಪರಿ ಇಲ್ಲಿ ಭಾರತೀಯತೆ ತುಂಬಿಕೊಂಡಿದೆ. ಊಟ-ಉಪಹಾರಗಳಿಗೆ "ಆನಂದ ಭವನ" "ಸರವಣ ಭವನ" ಎಂಬ "ಭವನಗಳ" ಸಾಲು, ಭಕ್ತಿ-ಭಾವನೆಗೆ ಶ್ರೀನಿವಾಸ, ಕಾಳಿ ಮುಂತಾದ ದೇವ-ದೇವತೆಗಳು, ಸಾಲು-ಸಾಲು ಚಿನ್ನ ಬೆಳ್ಳಿ ಆಭರಣ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ಬೆಂಗಳೂರಿನ ನ್ಯಾಷನಲ್ ಮಾರ್ಕೆಟ್ನಲ್ಲಿರುವಂತೆ ಸಾಲು-ಸಾಲು "ಗೂಡಂಗಡಿ"ಗಳು, ತಮಿಳಿನಲ್ಲಿರುವ ಅಂಗಡಿ-ಬಸ್ ಬೋರ್ಡ್ ಗಳು ಇತ್ಯಾದಿ ಇತ್ಯಾದಿ.
ಆಸ್ಟ್ರೇಲಿಯಾದಲ್ಲಿನ ಕಂಪನಿ ಕೆಲಸ ಮುಗಿಸಿ ಹಿಂತಿರುಗುವಾಗ ಸಿಂಗಪೋರ್ ಗೆ ಭೇಟಿ ನೀಡುವ ಅವಕಾಶ ಒದಗಿ ಬಂತು. ಸ್ವಾಮಿ ಕಾರ್ಯದೊಡನೆ ಸ್ವಕಾರ್ಯವೂ ಆಗಲಿಯೆಂದು ಸಿಂಗಪೋರ್ ನಲ್ಲಿ ಸಿಕ್ಕಿದ ೧೮ ತಾಸು "transit time" ನಲ್ಲಿ ದೇಶ ಸುತ್ತೋಣವೆಂದು "temporary visa" ಪಡೆದು, ಸ್ನಾನ ಮುಗಿಸಿ, ವಿಮಾನ ನಿಲ್ದಾಣದಿಂದ ಇನ್ನಿಬರು ಕಂಪನಿ ಸ್ನೇಹಿತರೊಡಗೂಡಿ ರಾತ್ರಿ ಸುಮಾರು ೧ರ ವೇಳೆಗೆ ಹೊರಬಿದ್ದೆವು. ಈ ಅಪರಾತ್ರಿಗೆ ಏನು ಮಾಡುವುದಪ್ಪ ಎಂದು "information center" ನಲ್ಲಿ ವಿಚಾರಿಸಲು ಸಿಕ್ಕಿದ ಉತ್ತರ "Take a cab and go to Little India". ಇಲ್ಲಿನ "ಮುಸ್ತಫಾ ಸೆಂಟರ್" ವಾಣಿಜ್ಯ ಸಂಕೀರ್ಣವು ದಿನದ ೨೪ತಾಸು ತೆಗೆದಿರುತ್ತದೆ!!!
ರಾತ್ರಿ ೨ರ ವೇಳೆ. |
ನಾವು ಭೇಟಿ ನೀಡಿದ ಸಮಯ ದೀಪಾವಳಿಯ ಮುನ್ನಾ ದಿನ. ಇಡಿಯ "Little India" ಪ್ರದೇಶ ಬೆಳಕು-ತೋರಣಗಳಿಂದ ಸಿಂಗಾರಗೊಂಡಿತ್ತು. ಎಲ್ಲ ಕಡೆ ಹಬ್ಬದ ಖರೀದಿಯ ಭರಾಟೆ.
ಮುಸ್ತಫಾ ಸೆಂಟರ್ ನಲ್ಲಿನ ತಿರುಗಾಟ ಹಾಗು ಖರೀದಿಯ ನಂತರ ಬೆಳಗ್ಗೆ ೬ ಗಂಟೆಗೆ "ಆನಂದ ಭವನ"ದಲ್ಲಿ ಇಡ್ಲಿ-ವಡೆ ಸಾಂಬಾರ್.
ಬೆಳಗ್ಗಿನ ಜಾವ ೫ರ ವೇಳೆ. |
ದೇವರ ದರ್ಶನದ ನಂತರ ಮೆಟ್ರೋ ರೈಲು ಹಿಡಿದು "Sentosa island" ನ ಕಡೆಗೆ ಪ್ರಯಾಣ. ಇದೊಂದು ಚಿಕ್ಕ ದ್ವೀಪದ ಮೇಲೆ ನಿರ್ಮಿಸಿದ ಮನೋರಂಜನ ಕೇಂದ್ರ. ಇಲ್ಲಿ ಎಲ್ಲ ವಯೋಮಾನಕ್ಕೆ ತಕ್ಕಂತೆ ಆಟಗಳು ಹಾಗು ಇತರೆ ಮನೋರಂಜನ ಕೇಂದ್ರಗಳಿವೆ. ಒಂದು ದಿನ ಕುಟುಂಬ ಅಥವಾ ಸ್ನೇಹಿತರ ಜೊತೆ ಸಮಯ ಕಳೆಯಲು ಬಹಳ ಪ್ರಶಸ್ಥವಾದ ಸ್ಥಳ.
ಇಲ್ಲಯ ಹಕ್ಕಿ, ಕೀಟ ಹಾಗು ಪತಂಗ ಉಧ್ಯಾನ ಬಹಳ ಚೆನ್ನಾಗಿದೆ.
ಸಿಂಗಪೋರ್ ನ ರಾಷ್ಟ್ರೀಯ ಲಾಂಚನ - "Merilion" ನ ಪ್ರತಿಕ್ರತಿಯು ನೋಡುಗರನ್ನು ಆಕರ್ಷಿಸುತ್ತದೆ.
ಸಂಜೆ ೫ರ ತನಕ ಇಲ್ಲಿ ಸುತ್ತಾಡಿ ವಿಮಾನ ನಿಲ್ದಾಣ ಕಡೆಗೆ ಮರುಪ್ರಯಾಣ. ಸಂಜೆಯ ೭ರ ವಿಮಾನದಲ್ಲಿ ಸಿಂಗಪೋರ್ ಗೆ ವಿದಾಯ ಹೇಳಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು.
No comments:
Post a Comment