Friday, 5 November 2010

ಅಭಿವ್ಯಕ್ತಿ ಸ್ವಾತಂತ್ರ್ಯ - ಒಂದು ಜಿಜ್ಞಾಸೆ

"ಕಾಶ್ಮೀರ ಎಂದೂ ಭಾರತದ ಅಂಗವಾಗಿರಲಿಲ್ಲ" - ಇದು ಇತ್ತೀಚಿಗೆ ಅರುಂಧತಿ ರಾಯ್ ಎಂಬ "ಬುದ್ದಿಜೀವಿ" ನೀಡಿದ ಹೇಳಿಕೆ. ಇವರನ್ನು ಬಂದಿಸಬೇಕು ಎಂಬ ಕೂಗು ಕೇಳಿಬಂದಾಗ ಈ ಮಹಿಳಾಮಣಿ ತನ್ನ ನಿಲುವನ್ನು ಸಮರ್ಥಿಸಿ ನೀಡಿದ ಇನ್ನೊಂದು ಹೇಳಿಕೆ "ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ನೀಡದ ಭಾರತಕ್ಕೆ ಧಿಕ್ಕಾರ".

ಅಭಿವ್ಯಕ್ತಿ ಸ್ವಾತಂತ್ರ್ಯ - ಹಾಗೆಂದರೇನು?
        ಒಬ್ಬ ವ್ಯಕ್ತಿ ತನ್ನ ಅನಿಸಿಕೆಗಳನ್ನು ನಿರ್ಭಯವಾಗಿ ವ್ಯಕ್ತಪಡಿಸಲು ಇರುವ ಪರಿಸ್ಥಿತಿಯೇ "ಅಭಿವ್ಯಕ್ತಿ ಸ್ವಾತಂತ್ರ್ಯ". ಇದು ಒಂದು ಪ್ರಜಾಪ್ರಭುತ್ವ ರಾಷ್ಟದಲ್ಲಿ ಮಾತ್ರ ಸಾಧ್ಯ.

ಅಭಿವ್ಯಕ್ತಿ ಸ್ವಾತಂತ್ರ್ಯ v/sಹುಚ್ಚು ಹೇಳಿಕೆ!!!
         ಅಭಿವ್ಯಕಿ ಸ್ವಾತಂತ್ರ್ಯದಡಿಯಲ್ಲಿ ಪ್ರಸ್ತುತಪಡಿಸುವ ವಿಚಾರಗಳು ಸಮಾಜದ ಉನ್ನತಿಗೆ ಪೂರಕವಾಗಿರಬೇಕೇ ಹೊರತು ಮಾರಕವಗಿರಬರದು. ಆದರೆ ಇಂತಹ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಮಾತಿನ ಮೇಲೆ ಹಿಡಿತವಿಲ್ಲದೆ ಹುಚ್ಚು ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸುವ ""ಸೆಕ್ಯುಲರ್" ಹಾಗು "ಬುದ್ಧಿಜೀವಿ" ಮಂದಿಯೇ ಇಂದು ನಮ್ಮಲ್ಲಿ ಬಹಳ ಮಂದಿ ಹುಟ್ಟಿಕೊಂಡಿದ್ದಾರೆ. ಯಾವುದೋ ಒಂದು ಪ್ರಶಸ್ತಿ ಅಥವಾ ಪುರಸ್ಕಾರ ಸಿಕ್ಕಿದೊಡನೆ ಹುಚ್ಚು ಹೇಳಿಕೆಗಳನ್ನು ನೀಡಲು ಗುತ್ತಿಗೆ ಪಡೆದಂತೆ ವರ್ತಿಸುವ ಮಂದಿ ಬಹಳ. ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ - ಅತಿ ಶೀಘ್ರ ಹೆಸರು ಗಳಿಸಬೇಕಂದ್ರೆ, ಪತ್ರಿಕೆಯಲ್ಲಿ ತಮ್ಮ ಹೆಸರು ಬರಬೇಕಂದ್ರೆ ಮಾಡಬೇಕಾದ ಸರಳವಾದ ಕೆಲಸವೆಂದರೆ ಹಿಂದೂ ವಿರೋಧಿ ಹೇಳಿಕೆಯನ್ನು ನೀಡುವುದು ಅಥವಾ ನಕ್ಸಲ್/ಉಗ್ರವಾದಿಗಳ ಪರವಾಗಿ ಮಾತನಾಡುವುದು. ಇಂತ ಹೇಳಿಕೆಗೋಸ್ಕರ ಹಸಿವಿನಿಂದ ಕಾತರಿಸುವ ಮಾಧ್ಯಮಗಳು ಇವನ್ನೇ ದೊಡ್ಡ ಸುದ್ಧಿ ಮಾಡಿ "ಬ್ರೇಕಿಂಗ್ ನ್ಯೂಸ್" ಎಂಬ ಹಣೆಪಟ್ಟಿ ಕಟ್ಟಿ ಬಿತ್ತರಿಸುತ್ತವೆ. ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡಿ ರಾಜಾರೋಷವಾಗಿ ಮೆರೆಯಬಹುದಾದ ಏಕೈಕ ರಾಷ್ಟ್ರವೆಂದರೆ ಭಾರತ ಮಾತ್ರವೇ ಇರಬೇಕು!!!!

ಅಭಿವ್ಯಕ್ತಿ ಸ್ವಾತಂತ್ರ್ಯ v/s Vote Bank ರಾಜಕಾರಣ
ಪ್ರಸಕ್ತ ರಾಜಕಾರಣದಲ್ಲಿನ ಅತಿ ಅಪಾಯಕಾರಿ ಪಿಡುಗೆಂದರೆ "VOTE BANK POLITICS". ಒಂದು ವರ್ಗದ ಮತದಾರರನ್ನು ತಮ್ಮ ಪಕ್ಷದ ಕಡೆ ಸೆಳೆಯುದಕ್ಕಾಗಿ ರಾಜಕಾರಣಿಗಳು ನಡೆದುಕೊಳ್ಳುವ ರೀತಿ ಬಹಳ ಅಸಹ್ಯ ಹುಟ್ಟಿಸುವಂತದ್ದು. ದೇಶದ ಅಭಿವ್ರದ್ದಿಯ ಚಿಂತನೆಯಲ್ಲಿ  ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯ ಏನೇ ಇದ್ದರೂ ಇಂತಹ ಕೆಟ್ಟ ಕಾರ್ಯಗಳಲ್ಲಿ ಎಲ್ಲರೂ ಸಮಾನರು!!! ಈ ಮತ ಬ್ಯಾಂಕ್ ರಾಜಕಾರಣದಿಂದಾಗಿ ಎಷ್ಟೋ ಅಪರಾಧಗಳ ತೀರ್ಪು ದೇಶದ ನ್ಯಾಯಾಲಯದಲ್ಲಿ ಕೊಳೆಯುತ್ತಿದೆ. ದೇಶದ್ರೋಹದ ಆರೋಪದಡಿ ಬಂದಿತರಾದವರು ಆರಾಮವಾಗಿ ಸೆರೆಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಉದಾಹರಣೆ "ಆಫ್ಸಲ್ ಗುರು" ಹಾಗು "ಕಸಬ್" ಪ್ರಕರಣಗಳು. ಈ ದೇಶದ ಆಡಳಿತ ಕೇಂದ್ರವಾದ ಸಂಸತ್ ಭವನದ ದಾಳಿಯಲ್ಲಿ ಭಾಗಿಯಾದವನಿಗೆ ಮರಣದಂಡನೆ ವಿಧಿಸಲು ಸರಕಾರ ಹಿಂಜರಿಯುತ್ತಿದೆ. ಮುಂದೊಂದು ದಿನ ಇವನನ್ನು ಖುಲಾಸೆ ಮಾಡಿದರೂ ಆಶ್ಚರ್ಯವಿಲ್ಲ. ಅದೇ ಅಮೇರಿಕ ಅಥವಾ ಇನ್ಯಾವುದೇ ದೇಶವಾಗಿದ್ದರೆ ಯಾವಾಗಲೋ ಅದೊಂದು ಮುಗಿದ ಅಧ್ಯಾಯ ಆಗಿರುತ್ತಿತ್ತು.

ಭಾರತವು ಈ ಎಲ್ಲ ಕೊಳಕು ರಾಜಕಾರಣದಿಂದ ಮುಕ್ತವಾಗಿ, ದೇಶದ ಸಾರ್ವಭೌಮತ್ಯಕ್ಕೆ ಧಕ್ಕೆ ತರುವಂತ ಕಾರ್ಯ - ವಿಚಾರಗಳಿಗೆ ಪಕ್ಷಬೇಧ ಮರೆತು ಒಂದು ಧೃಡ ನಿರ್ಧಾರ ಕೈಗೊಳ್ಳುವ ಸಧೃಡ ರಾಷ್ಟ್ರವಾಗಲಿ ಎಂದು ಆಶಿಸೋಣ.

2 comments:

  1. ಜಿಜ್ಞಾಸೆ ತರ್ಕಬದ್ದವಾಗಿ ಮೂಡಿ ಬಂದಿದೆ ಸುಧೀರ್ ...ಬುದ್ದಿಜೀವಿಗಳು ಎನಿಸಿಕೊಂಡವರ ಹೇಳಿಕೆಗಳು ದೇಶದಲ್ಲಿ ಹೆಚ್ಹು ಜನರ ಗಮನಕ್ಕೆ ಬರುತ್ಹವೇ .. ಅದನ್ನ ಬಂಡವಾಳವಾಗಿ ಇಟ್ಟುಕೊಂಡು ವೋಟು ಬ್ಯಾಂಕ್ ರಾಜಕಾರಣದ ನಿಶ್ಯಕ್ತಿ ಬಳಸಿ ಇಂಥ ಹೇಳಿಕೆ ನೀಡುವುದು.... ಮಿತಿ ಮೀರಿ ವರ್ತಿಸುವುದು ದೇಶದ ಹೇಳಿಗೆಗೆ ಒಗ್ಗಟ್ಟಿಗೆ ಕುಂದು ತರುವ ನಡೆವಳಿಕೆ ...

    ReplyDelete
  2. ಸರಿಯಾದ ಮಾತು.. ಎಲ್ಲಿಯತನಕ ದೇಶ ರಾಜಕೀಯವಾಗಿ ಮುಂದುವರಿಯುದಿಲ್ಲವೋ ಅಲ್ಲಿಯತನಕ ಈ ಪಿಡುಗಿನ ನಿವಾರಣೆ ಅಸಾಧ್ಯ.

    ReplyDelete